

ತುಳುನಾಡಿನ ಜಾನಪದ ಕ್ರೀಡೆ ಎಂದೇ ಹೆಸರಾದ ಕಂಬಳ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳಕ್ಕೆ ಬುಧವಾರ ಭೂಮಿ ಪೂಜೆಯನ್ನು ಎರ್ಮಾಳು ಬಡಕೊಟ್ಟು ಬಾಕಿಮಾರು ಗದ್ದೆಯಲ್ಲಿ ನೆರವೇರಿಸುವ ಮೂಲಕ ಸಮಿತಿಯು ಉತ್ಸವಕ್ಕೆ ಅಧಿಕೃತ ಸಿದ್ದತೆ ಆರಂಭಿಸಿತು. ವೇದಿಕೆಯಲ್ಲಿ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳ ಲೋಗೋ ಅನಾವರಣಗೊಳಿಸಲಾಯಿತು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿ ಕಂಬಳದ ಲಾಂಛನ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನೀಲ್ ಕುಮಾರ್, ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಎರ್ಮಾಳು ತೆಂಕ-ಬಡಾ ಜೋಡುಕರೆ ಕಂಬಳದ ರೂವಾರಿ ಎರ್ಮಾಳು ರೊಹಿತ್ ಹೆಗ್ಡೆ, ಎರ್ಮಾಳು ಬೀಡು ಅಶೋಕ್ ರಾಜ್, ರವಿ ಭಟ್ ಗೌರವಾಧ್ಯಕ್ಷರು ಸುರೇಶ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ , ಚಂದ್ರಹಾಸ ಶೆಟ್ಟಿ ಪುಚ್ಚೊಟ್ಟು ಸ್ವಾಗತ ಸಮಿತಿ ಅಧ್ಯಕ್ಷರು, ಬಾಲಚಂದ್ರ ಶೆಟ್ಟಿ ಪುಚ್ಚೊಟ್ಟು , ಕಾರ್ಯದರ್ಶಿ ಸಂತೋಷ್ ಶೆಟ್ಟಿ ಬರ್ಪಣಿ ಎರ್ಮಾಳ್ ಮಸೀದಿಯ ಧರ್ಮ ಗುರು ಉಚ್ಚಿಲ ಚರ್ಚ್ ಧರ್ಮ ಗುರುಗಳು ಅಶೋಕ ಶೆಟ್ಟಿ ಕಟಪಾಡಿ ಅಮರನಾಥ ಶೆಟ್ಟಿ ಕಟಪಾಡಿ ಸಂತೋಷ್ ಶೆಟ್ಟಿ ಚೊಕ್ಕಾಡಿ ಜನಾರ್ದನ ಕಂಬಳ ಸಮಿತಿಯ ಅಧ್ಯಕ್ಷರು, ಸದಸ್ಯರು, ಕಂಬಳ ಅಭಿಮಾನಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.






