

2005 ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅಧಿಕಾರಾವಧಿಯಲ್ಲಿ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷಿ ಯೋಜನೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆ(MGNREGA)ಯು, ಗ್ರಾಮೀಣ ಭಾಗದ ಕಾರ್ಮಿಕರಿಗೆ ಉದ್ಯೋಗ ನೀಡುವುದಲ್ಲದೆ, ಉದ್ಯೋಗ ಬೇಡಿಕೆಯ- ಕಾನೂನಾತ್ಮಕ ಹಕ್ಕುಗಳನ್ನು ಒದಗಿಸಿತ್ತು. ಈ ಕಾಯ್ದೆಯು ಮಹಿಳೆಯರು, ದಲಿತರು, ಆಡಿವಾಸಿಗಳು ಮತ್ತು ಗಡಿಭಾಗದ ಬಹುತೇಕ ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿತ್ತು. ಆದರೆ, ಇದರ ಹೆಸರನ್ನು ತಿದ್ದುಪಡಿಮಾಡಿ, “VB-GRAM-G ” ಎಂದು ಮರುನಾಮಕರಣ ಮಾಡಿದ್ದೆ ಅಲ್ಲದೆ, ಅದರ ಮೂಲಸ್ವರೂಪ ವನ್ನೇ ಬದಲಾಯಿಸಿ, ಬಡವರ ಅನ್ನದ ಬಟ್ಟಲಿಗೆ ಮಣ್ಣು ಹಾಕುವ ಕುತಂತ್ರಕ್ಕೆ ಕೇಂದ್ರ ಬಿ. ಜೆ. ಪಿ ಸರಕಾರ ಮುನ್ನುಡಿ ಬರೆದಿದೆ.
“ಮನರೇಗಾ ” ದ ಪ್ರಾಮುಖ್ಯತೆಯನ್ನು ಉಳಿಸಲು, ಉದ್ಯೋಗ ಖಾತರಿಯ ಹಕ್ಕನ್ನು ರಕ್ಷಿಸಲು ಮತ್ತು ಅದರ ಮೂಲಸ್ವರೂಪವನ್ನು ಮರುಸ್ಥಾಪಿಸಲು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ರಾಷ್ಟ್ರವ್ಯಾಪಿ, “ಮನರೇಗಾ ಬಚಾವೋ ಸಂಗ್ರಾಮ್ ” ಆಂದೋಲನ ವೆಂಬ ಜನಪರ ಚಳುವಳಿಯನ್ನು ಆಯೋಜಿಸಲು ಸೂಚಿಸಿದೆ. ಅದರಂತೆ ಕಾಪುವಿನಲ್ಲಿ ಈ ಆಂದೋಲನದ ಪ್ರಥಮ ಸಮಾವೇಶವನ್ನು ಆಯೋಜಿಸುವ ಮೂಲಕ ಚಾಲನೆ ನೀಡಲಾಗುವುದು ಎಂದು ಕೆ. ಪಿ. ಸಿ. ಸಿ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾದ ವಿನಯ್ ಕುಮಾರ್ ಸೊರಕೆಯವರು ಹೇಳಿದರು.
ಅವರು,, ಇಂದು ಈ ಪ್ರಯುಕ್ತ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ, ದಿನಾಂಕ- 30/01/2026, ಶುಕ್ರವಾರ ದಂದು ಪೂರ್ವಾಹ್ನ ಗಂಟೆ 10.00 ಕ್ಕೆ ಸರಿಯಾಗಿ, ಕಾಪು ಶ್ರೀ. ಲಕ್ಷ್ಮೀ ಜನಾರ್ಧನ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕರನ್ನು ಸೇರಿಸಿ, ಅಲ್ಲಿಂದ ಕಾಪು ಪೇಟೆಯವರೆಗೆ ಜಾಥಾ ನಡೆದು, ಕಾಪು ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಸಭೆ ಯನ್ನು ಆಯೋಜಿಸಲಾಗಿದೆ ಎಂದರು.
ಈ ಸಮಾವೇಶದಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ವಾಗ್ಮಿಗಳಾದ ಶ್ರೀ. ನಿಖೇತ್ ರಾಜ್ ಮೌರ್ಯ ಹಾಗೂ ಶ್ರೀ. ಸುಧೀರ್ ಕುಮಾರ್ ಮುರೊಳ್ಳಿ ಯವರು ಭಾಗವಹಿಸಲಿಕ್ಕಿದ್ದು, ಎಲ್ಲಾ ಗ್ರಾಮಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಜನರನ್ನು ಕರೆತಂದು, “ಮನರೇಗಾ ” ರದ್ದುಗೊಳಿಸಿರುವುದರ ಷಡ್ಯಂತ್ರದ ಬಗ್ಗೆ ಮಾಹಿತಿ ದೊರಕಿಸಿ ಕೊಡಬೇಕು ಎಂದರು.
ಈ, ನಿಟ್ಟಿನಲ್ಲಿ ಬ್ಲಾಕ್ ವ್ಯಾಪ್ತಿಯ ಎಲ್ಲ 19 ಗ್ರಾಮೀಣ ಕಾಂಗ್ರೆಸ್ ಸಮಿತಿಗಳಿಗೆ ಈಗಾಗಲೇ ಭೇಟಿ ನೀಡಿ ಜನರಿಗೆ ಮನವರಿಕೆ ಮಾಡಿಕೊಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿರುತ್ತೇವೆ ಎಂದರು.
ಸಭೆಯ ಪೂರ್ವದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ 76ನೇ ಗಣರಾಜ್ಯೋತ್ಸವದ ಪ್ರಯುಕ್ತ, ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
ಇತ್ತೀಚೆಗೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಮಿತಿಗೆ ಕಾರ್ಯದರ್ಶಿ ಯಾಗಿ ನೇಮಕಗೊಂಡ ಶ್ರೀಮತಿ. ಜೇಬಾ ಸೆಲ್ವನ್ ರವರನ್ನು, ಅವರ ಸಾಧನೆ ಮತ್ತು ಕ್ರಿಯಾಶೀಲತೆಯನ್ನು ಗುರುತಿಸಿ, ಅಭಿನಂದಿಸಿ ಗೌರವಿಸಲಾಯಿತು.
ಉತ್ತಮ ಉದ್ಯಮಿ ಪ್ರಶಸ್ತಿಗೆ ಭಾಜನರಾದ ಕಾಪು ಯೋಜನಾ ಪ್ರಾಧಿಕಾರದ ಸದಸ್ಯ ಶ್ರೀ. ಹರೀಶ್ ನಾಯಕ್ ರವರನ್ನು ಸಮ್ಮಾನಿಸಲಾಯಿತು.
ಸಭೆಯನ್ನುದ್ದೇಶಿಸಿ ಕೆ. ಪಿ. ಸಿ. ಸಿ ಸಂಯೋಜಕರಾದ ಶ್ರೀ. ನವೀನ್ ಚಂದ್ರ ಜೆ.. ಶೆಟ್ಟಿ ಮತ್ತು ಎ. ಐ.ಸಿ. ಸಿ ಮಹಿಳಾ ಸಮಿತಿಯ ಕಾರ್ಯದರ್ಶಿ ಜೇಬಾ ಸೆಲ್ವನ್ ಮಾತನಾಡಿದರು.
ಪ್ರಮುಖರಾದ ನವೀನ್ ಚಂದ್ರ ಸುವರ್ಣ, ಪ್ರಶಾಂತ್ ಜತ್ತನ್ನ, ಶರ್ಫುದ್ದೀನ್ ಶೇಖ್, ಶಾಂತಲತ ಶೆಟ್ಟಿ, ಹಸನಬ್ಬ ಶೇಖ್, ರಿಯಾಜ್ ಮುದರಂಗಡಿ ಮತ್ತಿತರ ಪ್ರಮುಖರು, ಬ್ಲಾಕ್ ಪದಾಧಿಕಾರಿಗಳು, ಪುರಸಭಾ ಸದಸ್ಯರು, ವಿವಿಧ ಘಟಕ / ಸಮಿತಿಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವೈ. ಸುಕುಮಾರ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ಧನ್ಯವಾದ ವಿತ್ತರು.






