Advertisement

ಮಲಬಾರ್ ಗೋಲ್ಡ್‌ನಲ್ಲಿ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣಗಳ ಪ್ರದರ್ಶನ ಉದ್ಘಾಟನೆ

ಉಡುಪಿ, ಅ.೨೩: ಮಲಬಾರ್ ಗೋಲ್ದ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನ.೨ರವರೆಗೆ ಹಮ್ಮಿಕೊಳ್ಳಲಾಗಿರುವ ’ಆರ್ಟಿಸ್ಟ್ರಿ’ ಕಲಾತ್ಮಕ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಯೋಗ ತಜ್ಞೆ ಡಾ.ಚರಿಷ್ಮಾ ಶೆಟ್ಟಿ ಮೈನ್ ವಜ್ರಾಭರಣ, ಚೇತನಾ ಗದ್ರಟಗಿ ಡಿವೈನ್ ಚಿನ್ನಾಭರಣ, ಡಾ.ಚೈತ್ರಾ ಸುಹಾನ್ ಶೆಟ್ಟಿ ‘ಎರ’ ಅನ್‌ಕಟ್ ಡೈಮಂಡ್ಸ್ ಸಂಗ್ರಹವನ್ನು ಅನಾವರಣಗೊಳಿಸಿದರು. ರೂಪದರ್ಶಿಗಳಾದ ಸುಶ್ಮಾ, ಸಮಿಕ್ಷಾ, ಆರಾಧನಾ ಶೆಟ್ಟಿ ರ್ಯಾಂಪ್ ವಾಕ್ ಮಾಡಿದರು.
ಬಳಿಕ ಚೇತನಾ ಗದ್ರಟಗಿ ಮಾತನಾಡಿ, ಆಭರಣಗಳ ಮುಂಗಡ ಬುಕ್ಕಿಂಗ್ ಖರೀದಿಗೆ ಆದ್ಯತೆ ನೀಡುತ್ತಿದ್ದು ಬೇರೆ ಚಿನ್ನಾಭರಣ ಮಳಿಗೆಗಳಿಗೆ ಹೋದರೂ ಮಲಬಾರ್ ಗೋಲ್ಡ್ ಕೊನೆಯ ಆಯ್ಕೆಯಾಗಿದೆ. ಅದಕ್ಕೆ ಕಾರಣ ಆ ಸಂಸ್ಥೆಯ ಮೇಲಿನ ನಂಬಿಕೆ ಎಂದು ಹೇಳಿದರು.

ಡಾ. ಚರಿಷ್ಮಾ ಶೆಟ್ಟಿ ಮಾತನಾಡಿ, ಇಲ್ಲಿನ ವೈವಿಧ್ಯಮಯ ಆಭರಣಗಳು ಕಣ್ಮನ ಸೆಳೆಯುತ್ತಿವೆ. ಅದೇ ರೀತಿ ಸಂಸ್ಥೆಯ ಸಿಬ್ಬಂದಿಗಳು ಗ್ರಾಹಕ ಸ್ನೇಹಿಯಾಗಿ ಪ್ರೀತಿ ತೋರಿಸುತ್ತಾರೆ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಡಾ.ಚೈತ್ರಾ ಸುಹಾನ್ ಶೆಟ್ಟಿ ಮಾತನಾಡಿ, ಯಾವ ಹೆಣ್ಣಿಗೂ ವಜ್ರಾಭರಣ, ಚಿನ್ನಾಭರಣ ಇಷ್ಟವಾಗದೇ ಇರುವುದಿಲ್ಲ. ಕಲಾತ್ಮಕ ಆಭರಣಗಳನ್ನು ನೋಡುವುದೇ ಚಂದ. ಆಭರಣಗಳ ವೈವಿಧ್ಯತೆ, ವಿನ್ಯಾಸದ ಜತೆಗೆ ನಾನಾ ಆಭರಣಗಳನ್ನು ತೋರಿಸುವ ಸಿಬ್ಬಂದಿಯ ತಾಳ್ಮೆ ಮತ್ತೆ ಮತ್ತೆ ಮಳಿಗೆಗೆ ಬರುವಂತೆ ಮಾಡುತ್ತದೆ ಎಂದರು.

ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥ ವಿಜಯ ಕುಮಾರ್ ಡಿ., ಶಾಖಾ ವ್ಯವಸ್ಥಾಪಕ ಪುರಂದರ ತಿಂಗಳಾಯ, ಸೇಲ್ಸ್ ಮ್ಯಾನೇಜರ್ ಹರೀಶ್ ಎಂ.ಜಿ., ಸುಧಾಕರ, ಇರ್ಷಾದ್, ಮಾರ್ಕೆಟಿಂಗ್ ಮ್ಯಾನೇಜರ್ ತಂಝೀಮ್ ಶಿರ್ವ ಉಪಸ್ಥಿತರಿದ್ದರು. ಕಲಾತ್ಮಕ ಚಿನ್ನಾಭರಣ ಪ್ರದರ್ಶನ ಆರ್ಟಿಸ್ಟಿ ಕುರಿತು ಸಮೀರ್ ಮಾಹಿತಿ ನೀಡಿದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಂಪೂರ್ಣ ಪಾರದರ್ಶಕ, ಉಚಿತ ನಿರ್ವಹಣೆ, ವಿನಿಮಯದಲ್ಲಿ ಶೂನ್ಯ ಕಡಿತ, ಬೈಬ್ಯಾಕ್ ಗ್ಯಾರಂಟಿ, ಉಚಿತ ವಿಮೆ, ಎಲ್ಲಾ ಆಭರಣಗಳು ಸಹ ಹಾಲ್‌ಮಾರ್ಕ್ ಹೊಂದಿದ್ದು, ೨೮ ರೀತಿಯ ಪರೀಕ್ಷೆ ಮಾಡಿದ ವಜ್ರಾಭರಣ ಗಳು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ವಿಶೇಷತೆಗಳಾಗಿವೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷವಾಗಿ ಚಿನ್ನ, ಅನ್‌ಕಟ್ ಮತ್ತು ಅಮೂಲ್ಯ ರತ್ನಾಭರಣಗಳ ಮೇಕಿಂಗ್ ಚಾರ್ಜ್ ಮೇಲೆ ಶೆ.೩೦ರವರಗೆ, ವಜ್ರದ ಮೌಲ್ಯದ ಮೇಲೆ ಶೇ.೩೦ವರಗೆ ರಿಯಾಯಿತಿ ಇದೆ ಎಂದು ಸಂಸ್ಥೆ ತಿಳಿಸಿದೆ

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.