Advertisement

ಉಡುಪಿಯಲ್ಲಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ 5ನೇ ಶಾಖೆ ಶುಭಾರಂಭ

ಐದು ವರ್ಷಗಳ ಹಿಂದೆ ಪ್ರಾರಂಭಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಮೂಲದ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅತಿ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದೆ . ಯುವಜನತೆಗೆ ಉದ್ಯೋಗದ ಸೃಷ್ಟಿಯ ಮೂಲಕ ಸಮಾಜದಲ್ಲಿ ಸಹಕಾರವೇ ಮೂಲ ತತ್ವ ಎಂಬಂತೆ ಕೆಲಸ ಮಾಡುತ್ತಿರುವ ಈ ಸೊಸೈಟಿಯು ರಾಜ್ಯ ವ್ಯಾಪ್ತಿ ಶಾಖೆಗಳೊಂದಿಗೆ ಹರಡಲಿ ಎಂದು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ಶುಭ ಹಾರೈಸಿದರು.

ಅವರು ಉಡುಪಿ ಸನಿಲ್ ಪ್ಲಾಜಾದಲ್ಲಿ ನೂತನವಾಗಿ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಐದನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ದೀಪ ಬೆಳಗಿಸಿದ ಮಾಜಿ ಸಚಿವರಾದ ಶ್ರೀ ಕೆ. ಅಭಯಚಂದ್ರ ಜೈನ್ ಮಾತನಾಡಿ ಸೊಸೈಟಿ ಅಧ್ಯಕ್ಷರಾದ ವಸಂತ್ ಬೆರ್ನಾರ್ಡ್ ರವರ ಸ್ವಾರ್ಥ ರಹಿತ ಕಾರ್ಯ ದಕ್ಷತೆಯಿಂದಾಗಿ ಸೊಸೈಟಿಯು ಉನ್ನತ ಸ್ಥಾನಕ್ಕೆ ಏರುತ್ತಿದೆ. ಉದ್ಯೋಗ ಸೃಷ್ಟಿಯ ಮೂಲಕ ಬಡ ಜನತೆಯ ಕಣ್ಣೀರು ಒರೆಸುವ ಕಾರ್ಯ ಶ್ಲಾಘನೀಯ. ಸರ್ವಜನೋ ಸುಖಿನೋ ಭವಂತು ಎಂಬಂತೆ ಈ ಸೊಸೈಟಿಯು ಕಾರ್ಯನಿರ್ವಹಿಸುತ್ತಿದ್ದು, ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಹಾರೈಸುತ್ತಿದ್ದೇನೆ ಎಂದು ನುಡಿದರು.

ಸೇಫ್ ಲಾಕರ್ ಉದ್ಘಾಟನೆ ಮಾಡಿದ ವಿಧಾನಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸ್ಪರ್ಧೆ ನೀಡುವ ಜಿಲ್ಲೆಯ ಸಹಕಾರಿ ಸೊಸೈಟಿಗಳಲ್ಲಿ ಒಂದಾದ ಪ್ರಿಯದರ್ಶಿನಿ ಕೋ ಆಪರೇಟರ್ ಸೊಸೈಟಿ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.

ಕಂಪ್ಯೂಟರ್ ವ್ಯವಸ್ಥೆ ಚಾಲನೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಶ್ರೀ ಮಿಥುನ್ ಎಮ್. ರೈ ಅವರು ಮಾಡಿದರು.

ಪ್ರಿಯದರ್ಶಿನಿ ಸ್ವಸಹಾಯ ಪ್ರಥಮ ಗುಂಪಿನ ಸದಸ್ಯರಿಗೆ ದಾಖಲೆ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಬೆಳಪು ಡಾ. ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ರವರು ಹಸ್ತಾಂತರಿಸಿದರು.

ಮುಲ್ಕಿ ಸೀಮೆಯ ಸಾವಂತ ಅರಸರಾದ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಪ್ಪನಾಡು ಮುಲ್ಕಿ ಇದರ ಅನುವಂಶಿಕ ಮೊಕ್ತೇಸರರಾದ ಶ್ರೀ ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಲಾವಣ್ಯ ಕೆ. ಆರ್ ರವರು, ಉಡುಪಿ ಜಿಲ್ಲಾ ಕೇಂದ್ರ ಸಹಕಾರಿ ಯೂನಿಯನ್ ಮತ್ತು ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಲಿ. ಇದರ ಅಧ್ಯಕ್ಷರಾದ ಶ್ರೀ ಇಂದ್ರಾಳಿ ಜಯಕರ ಶೆಟ್ಟಿ ರವರು, ಶ್ರೀ ಸರಸ್ವತಿ ಕೋ ಆಪರೇವಿಟ್ ಸೊಸೈಟಿ, ಪಡುಕುತ್ಯಾರ್ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಬಿ. ಸರ‍್ಯಕುಮಾರ್ ರವರು, ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ ಉಡುಪಿ ಇದರ ನಿರ್ದೇಶಕರಾದ ಡಾ| ಸುಶೀಲ್ ಜತ್ತನ್ನ ರವರು, ಹೈಟೆಕ್ ಮೆಡಿಕೆರ್ ಹಾಸ್ಪಿಟಲ್ ಉಡುಪಿ ಇದರ ಎಂ.ಡಿ. ಡಾ| ಟಿ. ಎಸ್. ರಾವ್,MS ರವರು, ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಶ್ರೀಧರ್ ದೇವಾಡಿಗ ರವರು, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಇದರ ಅಧ್ಯಕ್ಷರಾದ ಶ್ರೀ ರಮೇಶ್ ಕಾಂಚನ್ ರವರು, ಉಡುಪಿ ಹೋಮಿಯೋಪಥಿಕ್ ಫಿಶಿಷಿಯನ್ ಡಾ| ಬೆರಿಲ್ ಎ. ಬೆರ್ನಾರ್ಡ್ ರವರು, ಕಟ್ಟಡ ಮಾಲೀಕರಾದ ಶ್ರೀ ಶಂಭು ಎ. ಸನಿಲ್ ರವರು ಭಾಗವಹಿಸಿದರು.

ಸೊಸೈಟಿ ಅಧ್ಯಕ್ಷರಾದ ಎಚ್ ವಸಂತ್ ಬೆರ್ನಾರ್ಡ್ ಸ್ವಾಗತಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ವಂದಿಸಿದರು.

ನಿರ್ದೇಶಕರುಗಳಾದ ಉಮಾನಾಥ ಜೆ. ಶೆಟ್ಟಿಗಾರ್, ಧನಂಜಯ ಮಟ್ಟು, ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್, ಡಾ|| ಶೆರಿಲ್ ಅಯೋನ ಐಮನ್, ರೇಖಾ ಶೆಟ್ಟಿ, ಹರೀಶ್ ಎನ್ ಪುತ್ರನ್, ನವೀನ್ ಸಾಲ್ಯಾನ್ ಪಂಜ, ಮೋಹನದಾಸ್, ಅನಿಲ್ ಪೂಜಾರಿ ಸಸಿಹಿತ್ಲು, ರಜಿಯಾ ಬಾನು, ಕರಿಯ ಕಾಡಿಗ ಉಪಸ್ಥಿತರಿದ್ದರು

ಶಾಖಾ ಪ್ರಬಂಧಕರಾದ ನಿಶಾ ಸುಹೈಲ್ ಡೇನಿಯಲ್ ಕಾರ್ಯಕ್ರಮ ನಿರೂಪಿಸಿದರು.

ಲೆಕ್ಕಿಗರಾದ ಲೋಲಾಕ್ಷಿ, ವಿವಿಧ ಶಾಖಾ ಪ್ರಬಂಧಕರಾದ ಮೋಹನ್‌ದಾಸ್, ಪ್ರಜ್ಞಾಶ್ರೀ, ಅಕ್ಷತಾ ಶೆಟ್ಟಿ ಎಮ್, ಅಭಿಷ್ಟಾ ಜೈನ್, ಅಂಜಲಿ ಎಸ್ ದೇವಾಡಿಗ ಸಹಕರಿಸಿದರು.

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.