ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವದ ನಾಲ್ಕನೇ ದಿನವಾದ ಬುದವಾರದಂದು ಮಹೋತ್ಸವದ ಮುಖ್ಯದಿನವಾದ್ದರಿಂದ ಬೆಳಗ್ಗೆಯಿಂದ ತಡ ರಾತ್ರಿ ತನಕ ಭಕ್ತರು ಭಾರೀ ಸಂಖ್ಯೆಯಲ್ಲಿ ಪುಣ್ಯಕ್ಷೇತ ್ರಕ್ಕೆ ಹರಿದುಬಂದರು. ಸಂತ ಲಾರೆನ್ಸ್ ರವರಅತ್ಯದ್ಭುತ ಶಕ್ತಿಯುತ ಮಧ್ಯಸ್ಥಿಕೆಯಿಂದ ದೇವರಿಗೆ ತಮ್ಮ ಬೇಡಿಕೆಗಳನ್ನು ಸಮರ್ಪಿಸಿದರು.




















