Advertisement

ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನೂತನ ಶಾಖೆ ಉದ್ಘಾಟಿಸಿದ ಬಿ ಎಲ್ ಸಂತೋಷ್

Editorialವ್ಯವಹಾರ3 months ago27 Views

ಉಡುಪಿ, ಜು. 29: ಕಿನ್ನಿಮೂಲ್ಕಿ ಶಾಂತಾ ಬಿಲ್ಡಿಂಗ್‌ನಲ್ಲಿ ಕಾರ್ಯಾ ಚರಿಸುವ ಕಿದಿಯೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉದ್ಘಾಟನೆಯನ್ನು ಬುಧವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರು ಉದ್ಘಾಟಿಸಿದರು ಬಳಿಕ ಕಿನ್ನಿಮೂಲ್ಕಿ ಶ್ರೀ ವೀರಭದ್ರ ಕಲಾಭವನದಲ್ಲಿ ನಡೆದ ಸಭಾ ಕಾರ್ಯ ಕ್ರಮದಲ್ಲಿ ಬಿ. ಎಲ್. ಸಂತೋಷ್ ಮಾತನಾಡಿ ಸಹಕಾರ ಕ್ಷೇತ್ರವು ಭಾರತದ ಹಾಗೂ ಕರಾವಳಿ ಭಾಗದ ಗ್ರಾಮೀಣ ಮತ್ತು ಆರ್ಥಿಕ ಪ್ರಗತಿಯ ಬೆನ್ನೆಲುಬಾಗಿದೆ. ಸಾಮಾನ್ಯ ಜನರಿಗೆ, ರೈತರಿಗೆ ಹಾಗೂ ಸಣ್ಣ ಉದ್ದಿಮೆದಾರರಿಗೆ ತಕ್ಷಣದ ಆರ್ಥಿಕ ಬೆಂಬಲ ನೀಡುವಲ್ಲಿ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಹಕಾರ ಸಂಘಗಳ ಯಶಸ್ಸು ಗ್ರಾಹಕರ ಮತ್ತು ಸದಸ್ಯರ ವಿಶ್ವಾಸದ ಮೇಲೆ ನಿಂತಿರುತ್ತದೆ. ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಸಾರ್ವಜನಿಕರ ನಂಬಿಕೆಯನ್ನು ಉಳಿಸಿಕೊಂಡು, ಪಾರದರ್ಶಕ ಆಡಳಿತದೊಂದಿಗೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು

ಸೊಸೈಟಿಗೆ ಶುಭ ಕೋರಿದ ಡಾ| ಜಿ. ಶಂಕರ್ , ಕೇಂದ್ರ ಸರಕಾರದಿಂದ ಸಣ್ಣ ಹಣಕಾಸು ಸಂಸ್ಥೆಗಳಿಗೆ ಅನುಕೂಲ ವಾಗುವ ನಿಯಮ ರೂಪಿಸಲು ಸಲಹೆ ನೀಡಬೇಕೆಂದು ಬಿ.ಎಲ್. ಸಂತೋಷ್ ಅವರಲ್ಲಿ ಮನವಿ ಮಾಡಿದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಸಂಸ್ಥೆಯು ಯಶಸ್ಸಿನ ಪಥದಲ್ಲಿ ಸಾಗಲಿ ಎಂದರು. ಸೊಸೈಟಿ ಅಧ್ಯಕ್ಷ ಕಿದಿಯೂರ್ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಪ್ರಸ್ತಾಪನೆಗೈದರು ಈ ಸಂದರ್ಭದಲ್ಲಿ ಡಾ| ಕೆ. ಪ್ರಕಾಶ್ ಶೆಟ್ಟಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಎ. ಕಿರಣ್ ಕುಮಾರ್ ಕೊಡ್ಲಿ ಗುರುರಾಜ್ ಗಂಟಿಹೊಳೆ, ಡಾ। ಭರತ್ ಶೆಟ್ಟಿ ಸಹಕಾರಿ ಹಿರಿಯ ಧುರೀಣ ಟಿ. ಶಂಭು ಶೆಟ್ಟಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟಿ ಇಂದಾಳಿಇನ್‌ಫ್ರಾಸ್ಟ್ರಕ್ಟರ್‌ಸಂಸ್ಥೆಯ ಮುಖ್ಯಸ್ಥ ಅಶೋಕ್ ಕುಮಾರ್‌ಶೆಟ್ಟಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ। ಜಿ.ಎಸ್. ಚಂದ್ರಶೇಖ‌ರ್, ಟೌನ್ ಕೋ-ಆಪ್. ಬ್ಯಾಂಕ್ ಅಧ್ಯಕ್ಷ ಜಯಪ್ರಕಾಶ್ ಕೆದ್ಲಾಯ, ಸದ್ಗುರು ಕ್ರೆಡಿಟ್ ಕೋ-ಆಪ್. ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಶಾಂತಾ ಇಲೆಕ್ಟಿಕಲ್ಸ್ ಆಡಳಿತ ನಿರ್ದೇಶಕ ಶ್ರೀಪತಿ ಭಟ್ ಉಚ್ಚಿಲ, ಸೊಸೈಟಿ ಉಪಾಧ್ಯಕ್ಷೆ ಪ್ರಣೀತ ಶರದ್ ಶೆಟ್ಟಿ ಸಿಇಒ ಹರ್ಷಿತಾ, ನಿರ್ದೇಶಕರಾದ ಸುಧಾಕರ ಶೆಟ್ಟಿ, ಕೆ. ಉಮೇಶ್ ನಾಯರಿ, ಪ್ರಗತಿ ಯು. ಶೆಟ್ಟಿ ರೇಖಾ ಪಿ. ಆಚಾರ್ಯ, ನಿತಿನ್ ಪೂಜಾರಿ ಗುಂಡಿಬೈಲು, ಜಗದೀಶ್ ಶೆಟ್ಟಿ ಕೀಳಂಜೆ, ಕೆ.ರಾಮರಾಜ್, ಸಂಜಯ್, ಸಂಜೀವ ಉಪಸ್ಥಿತರಿದ್ದರು.

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.