

ಕಾಪು, ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಸುದೀರ್ಘ ಸಮಯದಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ವರ್ಷಾ ಆಚಾರ್ಯ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಡಾ.ಪ್ರಶಾಂತ್ ಶೆಟ್ಟಿಯವರು ವಹಿಸಿ,ವೃತ್ತಿ ಪ್ರವೃತ್ತಿಯಲ್ಲಿ ತನ್ನನ್ನು ತೊಡಗಿಸಿಕೊಂಡ ಶಿಕ್ಷಕಿಯವರು,ಮಕ್ಕಳ ಜೊತೆ ಪ್ರೀತಿಯಿಂದ ,ಯಾವುದೇ ವಿಷಯವನ್ನು ಬಹಳ ಸರಳವಾಗಿ ಬೋಧಿಸಿದವರು,ಹಾಗೂ ಸಂಸ್ಥೆಯ ಏಳಿಗೆಗಾಗಿ ದುಡಿದು ಎಲ್ಲರ ಪ್ರಶಂಸೆಯನ್ನು ಪಡೆದಿರುತ್ತಾರೆ ಎಂಬ ಮಾತುಗಳೊಂದಿಗೆ ನಿವೃತ್ತರಿಗೆ ಶುಭ ಹಾರೈಸಿದರು.
ಶಿಕ್ಷಕಿಯ ಸೇವಾ ಮನೋಭಾವನೆಯನ್ನು ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್,ಪ್ರಾಂಶುಪಾಲ ನೀಲಾನಂದ ನಾಯ್ಕ್,ಪ್ರಾಥಮಿಕ ಶಾಲಾ ಮುಖ್ಯಸ್ಥರಾದ ಗೇಬ್ರಿಯಲ್ ಮಸ್ಕರೇನ್ಹಸ್ ಇವರುಗಳು ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್,ಕನ್ನಡ ಮಾಧ್ಯಮ ವಿಭಾಗದ ಮುಖ್ಯಸ್ಥೆ ಕೃಪಾ ಅಮ್ಮನ್ನ,ಸನ್ಮಾನಿತರ ಪುತ್ರಿಯರಾದ ವೈಷ್ಣವಿ,ಅನುಶ್ರೀ, ಶಿಕ್ಷಕ,ಶಿಕ್ಷಕೇತರ ವೃಂದ,ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಸುನೈನಾ,ಸ್ವಾಗತಿಸಿ ಮತ್ತು ಹೇಮಲತ ವಂದಿಸಿದರು. ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಜಲಕ್ಷ್ಮಿ ರಾವ್ ನಿರೂಪಿಸಿದರು.






