Advertisement

ಮಂಗಳೂರು, ನ. 9 ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ‌ ಕೋ-ಆಪರೇಟಿವ್ ಸೊಸೈಟಿ ಲಿ. ನವೀಕೃತ ‘ವಿಶ್ವಸೌಧ’ದ ಉದ್ಘಾಟನೆ ಸನ್ಮಾನ ಮತ್ತು ವಜ್ರಮಹೋತ್ಸವದ ಸಮಾರೋಪ ಸಮಾರಂಭ

Editorialವ್ಯವಹಾರ11 months ago39 Views

ಮಂಗಳೂರು, ನ. 9: ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ.ನ ನವೀಕೃತ ‘ವಿಶ್ವಸೌಧ’ದ ಉದ್ಘಾಟನೆ ಮತ್ತು ವಜ್ರಮಹೋತ್ಸವದ ಸಮಾರೋಪ ಸಮಾರಂಭ ರವಿವಾರ ಕೊಟ್ಟಾರಚೌಕಿಯಲ್ಲಿರುವ ಸೊಸೈಟಿಯ ಆಡಳಿತ ಕಚೇರಿ ಬಳಿ ನೆರವೇರಿತು.

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿ, 1963ರಲ್ಲಿ ಸರಕಾರದಿಂದ ಚಿನ್ನ ನಿಯಂತ್ರಣ ಕಾಯಿದೆ ಜಾರಿಯಾದ ಸಂದರ್ಭದಲ್ಲಿ ಈ ವೃತ್ತಿ ಅವಲಂಬಿಸಿ ಬದುಕುತ್ತಿದ್ದವರು ಅತಂತ್ರರಾದಾಗ ಪಾಲ್ಕೆ ಬಾಬುರಾಯ ಆಚಾರ್ಯ ಅವರು 1964ರಲ್ಲಿ ಈ ಸೊಸೈಟಿ ಆರಂಭಿಸಿ ಸಮಾಜದ ಜನರಿಗೆ ಆರ್ಥಿಕವಾಗಿ ಬಲ ತುಂಬಿದರು. ಇಂದು ಮಾದರಿಯಾಗಿ ಬೆಳೆದು ನಿಂತಿದೆ ಎಂದು ಶ್ಲಾಘಿಸಿದರು

.ಅರಕಲಗೂಡು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ವಿಶ್ವಕರ್ಮ ಜಗದ್ಗುರು ಸ ಪೀಠದ ಅನಂತಶ್ರೀ ವಿಭೂಷಿತ ವ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಆಶೀರ್ವಚನ ಪಾಲ್ಕೆ ಒ ಬಾಬುರಾಯ ಅಚಾರ್ಯ ಅವರ 11 ಸತ್ ಸಂಕಲ್ಪ, ಸಹೃದಯತೆಯಿಂದಾಗಿ ಸಮಾಜಕ್ಕೆ ಪ್ರಯೋಜನವಾಗಿದೆ ಎಂದು ಶ್ಲಾಘಿಸಿದರು

. ಸಂಸದ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ, ಸಹಕಾರ ಕರಾವಳಿಯ ಸಹಜ ಗುಣ. ಇಲ್ಲಿ ಹಲವು ಸಹಕಾರಿ ಸಂಸ್ಥೆಗಳು ಮಾದರಿಯಾಗಿದ್ದು ಇದರಲ್ಲಿ ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ‌ ಕೋ-ಆಪರೇಟಿವ್ ಸೊಸೈಟಿ ಕೂಡ ಒಂದು ಎಂದರು.

ಸೊಸೈಟಿಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಸನ್ಮಾನ ಕಾರ್ಯಕ್ರಮ ನಡೆಯಿತು

ಪಾಲ್ಕೆ ಬಾಬುರಾಯ ಆಚಾರ್ಯ ಅವರ ಪುತ್ಥಳಿ ಅನಾವುಣಗೊಳಿಸಿದ ಅಯೋಧ್ಯ ಶ್ರೀ ರಾಮಲಲ್ಲಾ ವಿಗ್ರಹದ ನಿರ್ಮಾತೃ ಶಿಲ್ಪಿ ಡಾ| ಅರುಣ್ ಯೋಗಿರಾಜ್ ಅವರು ಮಾತನಾಡಿ, ನನ್ನ ಮೊದಲ ಕೆತ್ತನೆಗೆ ಮಾರ್ಬಲ್ ಖರೀದಿಸಲು ಸಹಕಾರಿ ಸಂಸ್ಥೆಯೇ ನೆರವಾಗಿತ್ತು ಎಂದು ಹೇಳಿದರು.

ಶಾಸಕರಾದ යි. ವೇದವ್ಯಾಸ ಕಾಮತ್, ಡಾ। ಭರತ್ ಶೆಟ್ಟಿ ವೈ. ಶುಭಹಾರೈಸಿದರು. ಸೊಸೈಟಿಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಜುವೆಲಸ್ ೯ನ ಧನಂಜಯ ಪಾಲ್ಕೆ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ, ದ.ಕ. ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾ‌ರ್ ರೈ ಬಾಲ್ಗೊಟ್ಟು ಮನಪಾ ಮಾಜಿ ಸದಸ್ಯ ಕಿರಣ್ ಕುಮಾರ್‌ಕೋಡಿಕಲ್, ಆಡಳಿತ ಮಂಡಳಿಯ ನಿರ್ದೇಶಕರು ಪ್ರದಾನ ವ್ಯವಸ್ಥಾಪಕ ಯಜೇಶ್ವರ ವಂದಿಸಿದರು. ಎನ್. ಆರ್. ದಾಮೋದರ ಆಚಾರ್ಯ, ವಾರುಣಿ ನಾಗರಾಜ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಎ. ಆನಂದ ಆಚಾರ್ಯ ವಂದಿಸಿದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ, ಸಹಾಯಧನ ವಿತರಣೆ ಮೊದಲಾದವುಗಳು ನಡೆಯಿತು

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.