Advertisement

ರುಡ್‌ಸೆಟ್ ಉಜಿರೆಯ 1000ನೇ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

Editorialಶಿಕ್ಷಣ2 months ago18 Views

ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟನೆ ಧರ್ಮಸ್ಥಳ: ರುಡ್‌ಸೆಟ್ ಸಂಸ್ಥೆ, ಉಜಿರೆಯ 44 ವರ್ಷಗಳ ಸಾಧನೆಯ ಮೈಲಿಗಲ್ಲಾದ 1000ನೇ ತರಬೇತಿ ಕಾರ್ಯಕ್ರಮವಾದ ಛಾಯಾಗ್ರಹಣ ಮತ್ತು ವೀಡಿಯೋಗ್ರಾಫಿ ತರಬೇತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪರಮ ಪೂಜ್ಯ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕ್ಯಾಮೆರಾದಲ್ಲಿ ಛಾಯಾಚಿತ್ರವನ್ನು ಸೆರೆಹಿಡಿಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಛಾಯಾಗ್ರಾಹಕರು ತಾಳ್ಮೆ, ಏಕಾಗ್ರತೆ ಹಾಗೂ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಉತ್ತಮ ಛಾಯಾಚಿತ್ರವು ಕೇವಲ ಕ್ಯಾಮೆರಾದಿಂದ ಮೂಡುವುದಿಲ್ಲ; ನೋಡುವ ದೃಷ್ಟಿಕೋನ, ಸಮಯಪ್ರಜ್ಞೆ ಹಾಗೂ ವಿಷಯದ ಆಳವಾದ ಅರಿವಿನಿಂದ ಮೂಡುತ್ತದೆ ಎಂದು ಹೇಳಿದರು. ವಿವಿಧ ಕೋನಗಳಿಂದ ವಿಷಯವನ್ನು ಅವಲೋಕಿಸಿ, ಸೂಕ್ತ ಕ್ಷಣವನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಛಾಯಾಗ್ರಾಹಕರು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ. ವಿಜಯಕುಮಾರ್ ಸ್ವಾಗತಿಸಿ, ರುಡ್‌ಸೆಟ್ ಉಜಿರೆಯ 44 ವರ್ಷಗಳ ಸೇವಾ ಪಯಣ ಹಾಗೂ 1000ನೇ ತರಬೇತಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಸುನಿಲ್ ಜಿ. ನಾಯ್ಕ್, ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್, ಲೋಹಿತ್ ಜೈನ್ ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಯಾದ ಶ್ರೀ ವೀರು ಶೆಟ್ಟಿ ಯವರು ಉಪಸ್ಥಿತರಿದ್ದರು.
ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿದರು.

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.