Advertisement

ಶ್ರೀ ಗಾಯತ್ರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ. ಲಿ‌ ಮಹಾಸಭೆ

ಶ್ರೀ ಗಾಯತ್ರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಲಿ ಉಡುಪಿ ಇದರ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಕಛೇರಿ ಆವರಣದ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಕೆ.ಜಯರಾಮ ಆಚಾರ್ಯ ರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷರು 2025-26 ರ ಸಾಲಿನ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿ ಸದಸ್ಯರಿಂದ ಮಂಜೂರಾತಿ ಪಡೆದರು.ಸಂಘವು ಲಾಭದಲ್ಲಿದ್ದು ಒಟ್ಟು ವ್ಯವಹಾರ 12 ಕೋಟಿಗೂ ಮೀರಿರುತ್ತದೆ. ,ಪ್ರಸಕ್ತ ಸಾಲಿನಲ್ಲಿ ಸಂಘವು ‘ಎ”ಶ್ರೇಣಿಯಲ್ಲಿದ್ದು ಶೇ.9ರಷ್ಟು ಲಾಭಾಂಶವನ್ನು ಘೋಷಣೆ ಮಾಡಿದೆ. ಅತಿಥಿಯಾಗಿ ಸನ್ನದು ಲೆಕ್ಕಪರಿಶೋಧಕರಾದ ಯು.ಬಿ ಅಜಿತ್ ಕುಮಾರ್ ಸಂಘದ ವ್ಯವಹಾರದ ಬೆಳವಣಿಗೆಯ ಕುರಿತು ಮಾತನಾಡಿದರು. ವಿಶೇಷ ಆಹ್ವಾನಿತ ಅತಿಥಿಗಳಾದ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಹಾಯಕ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ಸಂಸ್ಥೆಯ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು. ಪ್ರಧಾನ ವ್ಯವಸ್ಥಾಪಕರಾದ ಉಮೇಶ್ ಆಚಾರ್ಯ ಲೆಕ್ಕಪತ್ರಗಳ ಮಂಡನೆ ಮಾಡಿದರು. ಸಮಾಜ ಸೇವಕರಾದ ಪುರೋಹಿತ್ ಶಶಿಧರ್ ಆಚಾರ್ಯ, ಕಟಪಾಡಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್.ಎಸ್.ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಎಂಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.ಉಪಾಧ್ಯಕ್ಷರಾದ ಮೋಹನ್ ಎಂ.ಪಿ ಸ್ವಾಗತಿಸಿದರು. ನಿರ್ದೇಶಕರಾದ ಶ್ರೀ ಎಸ್ ಕಿಶೋರ್ ಆಚಾರ್ಯ, ಶ್ರೀ ಕೆ.ಶ್ರೀಧರ ಆಚಾರ್ಯ, ಶ್ರೀ ಅಲೆವೂರು ಯೋಗೀಶ್ ಆಚಾರ್ಯ, ಶ್ರೀ ಮೋಹನ್ ದಾಸ್ ಸಿ ಆಚಾರ್ಯ, ಶ್ರೀ ಸತೀಶ್ ಆಚಾರ್ಯ, ಶ್ರೀ ಪಾಂಡುರಂಗ ಆಚಾರ್ಯ, ಶ್ರೀಅಶೋಕ್ ಕುಮಾರ್, ಶ್ರೀ ಎ.ಎಸ್ ಪ್ರಸನ್ನ, ಆಚಾರ್ಯ, ಶ್ರೀಮತಿ ಮುಕ್ತ ಜಗದೀಶ್, ಶ್ರೀಮತಿ ಶಶಿಕಲಾ ಪಿ ಆಚಾರ್ಯ, ನಾಮನಿರ್ದೇಶಕರಾದ ಶ್ರೀಮತಿ ವಿಜಯಲಕ್ಷ್ಮಿ ಶೇಖರ್, ಶ್ರೀಮತಿ ಮೋಹಿನಿ ಬಿ ಆಚಾರ್ಯ, ಉಪಸ್ಥಿತರಿದ್ದು, ಶ್ರೀಮತಿ ಮುಕ್ತ ಜಗದೀಶ್ ವಂದಿಸಿದರು.

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.