Advertisement

ಆನೆಗುಂದಿ ಮಹಾಸಂಸ್ಥಾನದಲ್ಲಿ ಚಾತುರ್ಮಾಸ್ಯ ಸಮಾರೋಪ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 50ನೇ ಜನ್ಮವರ್ಧಂತಿಯ ಅಂಗವಾಗಿ ‘ಸುವರ್ಣ ಸಂಕಲ್ಪ’ ವರ್ಷಾಚರಣೆಗೆ ಚಾಲನೆ

Editorialಧಾರ್ಮಿಕ1 month ago476 Views

ಪಡುಕುತ್ಯಾರು, ಸೆ. 26: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ–ಪಡುಕುತ್ಯಾರು ಇದರ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 22ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಸಮಾರೋಪವು ಸೆ. 26ರಂದು ಪಡುಕುತ್ಯಾರಿನಲ್ಲಿ ವಿವಿಧ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ಜಗದ್ಗುರುಗಳವರ 50ನೇ ಜನ್ಮವರ್ಧಂತಿಯ ಹಿನ್ನೆಲೆಯಲ್ಲಿ *‘ಸುವರ್ಣ ಸಂಕಲ್ಪ ವರ್ಷಾಚರಣೆ 2026–2027’ಕ್ಕೂ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. *‘ಕುಲಗುರು ಪೀಠ ಜಾಗೃತಿ ಹಾಗೂ ಸಾಂಸ್ಕೃತಿಕ ಪಂಚಪ್ರಬೋಧನ ಸಂಕಲ್ಪ’**ದ ಆಶಯದೊಂದಿಗೆ ವರ್ಷಪೂರ್ತಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಜುಲೈ 29ರಂದು ಆರಂಭಗೊಂಡಿದ್ದ ಚಾತುರ್ಮಾಸ್ಯ ವ್ರತಾಚರಣೆಯ ಅವಧಿಯಲ್ಲಿ ವೈದಿಕ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ನಡೆದಿದ್ದು, ಭಾದ್ರಪದ ಶುಕ್ಲ ಪೌರ್ಣಮಿಯಂದು ಸಮಾರೋಪಗೊಂಡಿತು.

ದಿಗ್ವಿಜಯ ಮೆರವಣಿಗೆ

ಸಮಾರೋಪದ ಅಂಗವಾಗಿ ಬೆಳಿಗ್ಗೆ ವಿಶ್ವಕರ್ಮ ಯಜ್ಞ ಹಾಗೂ ಪೂರ್ಣಾಹುತಿ ನೆರವೇರಿದ ಬಳಿಕ ಸೀಮೋಲ್ಲಂಘನ ನಡೆಯಿತು. ಬೆಳಿಗ್ಗೆ 8.30ಕ್ಕೆ ಪಡುಕುತ್ಯಾರಿನಿಂದ ದಿಗ್ವಿಜಯ ಮೆರವಣಿಗೆ ಆರಂಭಗೊಂಡಿತು.

ಮೆರವಣಿಗೆಯು ಕಟಪಾಡಿಯ ಬೆಳಗುತ್ತಿಮಠದಲ್ಲಿರುವ ಪರಮಪೂಜ್ಯ ಜಗದ್ಗುರು ಶ್ರೀ ಅನಂತಶ್ರೀವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನಕ್ಕೆ ತೆರಳಿತು. ಬಳಿಕ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನ ಹಾಗೂ ಪಡುಕುತ್ಯಾರು ಶ್ರೀ ದುರ್ಗಾದೇವಿ ಮಂದಿರಗಳಿಗೆ ಭೇಟಿ ನೀಡಿ ಮಠಕ್ಕೆ ಮರಳಿತು.

ಪೂರ್ಣಕುಂಭ ಸ್ವಾಗತದೊಂದಿಗೆ ಜಗದ್ಗುರುಗಳವರನ್ನು ಮಹಾಸಂಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ಗೋಪೂಜೆ, ಶ್ರೀಗುರುಪಾದಪೂಜೆ ಹಾಗೂ ಧಾರ್ಮಿಕ ಸಭೆ ನಡೆಯಿತು. ನಂತರ ಮಹಾ ಸಂತರ್ಪಣೆ ನೆರವೇರಿತು.

ಧಾರ್ಮಿಕ ಸಭೆ

ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಹಾಗೂ ಆಶೀರ್ವಚನದಲ್ಲಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿದ್ದರು.

ಶ್ರೀ ದಿನೇಶ್ ಆಚಾರ್ಯ ಪಡುಬಿದ್ರಿ, ಶ್ರೀ ರವಿ ಆಚಾರ್ಯ ಕಾರ್ಕಳ, ಶ್ರೀ ಚಂದ್ರಯ್ಯ ಆಚಾರ್ಯ ಕಳಿ, ಶ್ರೀ ಬಾಲಕೃಷ್ಣ ಆಚಾರ್ಯ ಮೂಡಬಿದ್ರೆ, ಶ್ರೀ ಮಧುಕರ ಚಂದ್ರಶೇಖರ ಆಚಾರ್ಯ ಹೊನ್ನಾವರ, ಶ್ರೀ ಗಣೇಶ ಆಚಾರ್ಯ ಕಾಪು, ಶ್ರೀ ಬಿ.ಎಂ. ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಶ್ರೀ ಜನಾರ್ದನ ಆಚಾರ್ಯ ಆರಿಕ್ಕಾಡಿ, ಶ್ರೀ ಎಂ. ಪುರುಷೋತ್ತಮ ಆಚಾರ್ಯ ಕಂಬಾರು, ಶ್ರೀ ಜಗದೀಶ್ ಆಚಾರ್ಯ ಪಡುಪಣಂಬೂರು, ಶ್ರೀ ಕೆ. ನಾಗರಾಜ ಆಚಾರ್ಯ ಕಾಡಬೆಟ್ಟು ಉಡುಪಿ, ಶ್ರೀ ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಶ್ರೀ ಗಣೇಶ್ ಆಚಾರ್ಯ ಕೆಮ್ಮಣ್ಣು, ಶ್ರೀ ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು, ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ ಹಾಗೂ ಬ್ರಹ್ಮಶ್ರೀ ಕೇಶವ ಶರ್ಮಾ ಇರುವೈಲು ಗೌರವ ಉಪಸ್ಥಿತರಿದ್ದರು.

ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ಸುನಿಲ್ ಕುಮಾರ್ ಕಾರ್ಕಳ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.

‘ಸುವರ್ಣ ಸಂಕಲ್ಪ’ ವರ್ಷಾಚರಣೆ

ಜಗದ್ಗುರುಗಳವರ 50ನೇ ಜನ್ಮವರ್ಧಂತಿಯ ಅಂಗವಾಗಿ ಆರಂಭಗೊಂಡಿರುವ ‘ಸುವರ್ಣ ಸಂಕಲ್ಪ ವರ್ಷಾಚರಣೆ 2026–2027’ರಲ್ಲಿ ಮಕ್ಕಳ ಧಾರ್ಮಿಕ ಸಂಸ್ಕಾರಕ್ಕಾಗಿ ಶ್ರೀ ಬಾಲ ಸರಸ್ವತೀ ಹೋಮ, ಪಂಚಪ್ರಬೋಧ ಜಾಗೃತಿ ಅಭಿಯಾನ, ಯುವಜನರಿಗಾಗಿ ಸಾಂಸ್ಕೃತಿಕ–ಕ್ರೀಡಾ ಕಾರ್ಯಕ್ರಮಗಳು, ಶೈಕ್ಷಣಿಕ–ಆರ್ಥಿಕ ಸಬಲೀಕರಣದ ಕಾರ್ಯಾಗಾರಗಳು ಹಾಗೂ ಆನೆಗುಂದಿ ಕುಲಗುರು ಪೀಠ–ಶ್ರೀ ಸರಸ್ವತೀ ದೇವಸ್ಥಾನ ಮತ್ತು ಗುರುಮಠದ ಪೂರಕ ನಿರ್ಮಾಣ ಯೋಜನೆಗೆ ಶಿಲಾನ್ಯಾಸ ಸೇರಿದಂತೆ ಐದು ಪ್ರಮುಖ ಸಂಕಲ್ಪಗಳನ್ನು ಹಮ್ಮಿಕೊಳ್ಳಲಾಗಿದೆ.

ಗೌರವ ಹಾಗೂ ಸಹಕಾರ

ಕೇಂದ್ರ ಗ್ರಾಮೀಣ ಅಭಿವೃದ್ಧಿ ಇಲಾಖೆ ಹಾಗೂ ‘ಮೈ ಗವರ್ನಮೆಂಟ್’ಗಾಗಿ ಲಾಂಛನ ರಚಿಸಿದ ಪುತ್ತೂರಿನ ರಾಮಪ್ರಸಾದ್ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದ ನೇರ ಪ್ರಸಾರ ಹಾಗೂ ಧ್ವನಿವರ್ಧಕ ವ್ಯವಸ್ಥೆಗೆ ಸಹಕರಿಸಿದ ಚರಣ್ ಶರ್ಮ, ಪವನ್ ಶರ್ಮ, ವೇದಿಕೆ ನಿರ್ಮಾಣದ ಹರೀಶ್ ಆಚಾರ್ಯ ಮಂಗಳೂರು, ಹರೀಶ್ ಆಚಾರ್ಯ ಬೇಲಾಡಿ, ನಿತ್ಯಪಾದಪೂಜೆಗೆ ಸಹಕರಿಸಿದ ವಾದಿರಾಜ ಆಚಾರ್ಯ, ವಸಂತಾಚಾರ್ಯ ಮಜೂರು, ಛಾಯಾಗ್ರಾಹಕ ನವೀನ್ ಪಣಿಯೂರು, ನಿತ್ಯ ಭೋಜನ ವಿತರಣೆಯ ಪ್ರಸಾದ್ ಎಲ್ಲೂರು ಹಾಗೂ ಕನ್ನಡ ದೈನಿಕಗಳ ಮಾಧ್ಯಮ ಮಿತ್ರರನ್ನು ಗೌರವಿಸಲಾಯಿತು.

ವೈದಿಕ ಕಾರ್ಯಕ್ರಮಗಳಿಗೆ ಅಕ್ಷಯ ಶರ್ಮ ಹಾಗೂ ಶ್ರೀಧರ ಪುರೋಹಿತ್ ಕಟಪಾಡಿ ನೇತೃತ್ವ ನೀಡಿದರು. ಶಿವಕುಮಾರ್ ಶರ್ಮ, ಶಿವರಾಜ್ ಶರ್ಮ, ಮನೋಜ್ ಶರ್ಮ, ಪ್ರಶಾಂತ್ ಶರ್ಮ ಹಾಗೂ ಮೌನೇಶ್ ಶರ್ಮ ಸಹಕರಿಸಿದರು. ಶ್ರೀ ನಗರಮೇಂದ್ರ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳು ವೇದಘೋಷ ನಡೆಸಿದರು.

ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ಯ ಕಂಬಾರು ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ ವಂದಿಸಿದರು. ನ್ಯಾಯವಾದಿ ಕೆ.ಎಂ. ಗಂಗಾಧರಾಚಾರ್ಯ ಕೊಂಡೆಯೂರು ಹಾಗೂ ಗೀತಾ ಚಂದ್ರ ಕಾರ್ಕಳ ಕಾರ್ಯಕ್ರಮ ನಿರ್ವಹಿಸಿದರು.

ಶಿಷ್ಯವೃಂದ, ಭಕ್ತರು, ಪದಾಧಿಕಾರಿಗಳು ಹಾಗೂ ವಿವಿಧ ಸಮಿತಿಗಳ ಕಾರ್ಯಕರ್ತರ ಸಹಕಾರದಿಂದ ಚಾತುರ್ಮಾಸ್ಯ ಸಮಾರೋಪ ಯಶಸ್ವಿಯಾಗಿ ನೆರವೇರಿತು. ಸುವರ್ಣ ಸಂಕಲ್ಪ ವರ್ಷಾಚರಣೆಯ ಮೂಲಕ ಧಾರ್ಮಿಕ ಸಂಸ್ಕಾರ, ಸಾಂಸ್ಕೃತಿಕ ಜಾಗೃತಿ ಹಾಗೂ ಸಾಮಾಜಿಕ ಸಂಘಟನೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು.

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.