Advertisement

ಉಚ್ಚಿಲ ದಸರಾ ವೈಭವದ ಶೋಭಾಯಾತ್ರೆ ಸಂಪನ್ನ

ಉಡುಪಿ: ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದ ವತಿಯಿಂದ ಆಯೋಜಿಸಲಾಗಿದ್ದ ಉಡುಪಿ–ಉಚ್ಚಿಲ ದಸರಾ-2026 ವಿಜಯದಶಮಿಯಂದು ಅತ್ಯಂತ ವೈಭವಯುತವಾಗಿ ಸಂಪನ್ನಗೊಂಡಿತು. ನಾಡಿನ ಧಾರ್ಮಿಕ ಪರಂಪರೆ, ಕರಾವಳಿಯ ಸಾಂಸ್ಕೃತಿಕ ವೈಶಿಷ್ಟ್ಯ ಹಾಗೂ ಜನಪದ ಕಲಾವೈಭವವನ್ನು ಅನಾವರಣಗೊಳಿಸಿದ ಉಚ್ಚಿಲ ದಸರಾ ಶೋಭಾಯಾತ್ರೆ ಭಕ್ತರ ಗಮನ ಸೆಳೆಯಿತು. ಬಳಿಕ ಕಾಪು ಕಡಲತೀರದಲ್ಲಿ ನಡೆದ ಕಾಶಿಯ ಪಂಡಿತರಿಂದ ಗಂಗಾರತಿ, ಸಮುದ್ರಾರತಿ ಸೇರಿದಂತೆ ವಿವಿಧ ಆಕರ್ಷಕ ಕಾರ್ಯಕ್ರಮಗಳಿಗೆ ಸಾವಿರಾರು ಮಂದಿ ಸಾಕ್ಷಿಯಾದರು.

ವಿಜಯದಶಮಿಯ ಅಂಗವಾಗಿ ನಡೆದ ಉಚ್ಚಿಲ ದಸರಾ ಶೋಭಾಯಾತ್ರೆಯಲ್ಲಿ ಕರಾವಳಿಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮೀನುಗಾರಿಕಾ ಪರಂಪರೆಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು ವಿಶೇಷ ಆಕರ್ಷಣೆಯಾಗಿದ್ದವು. ಶ್ರೀ ಮಹಾಲಕ್ಷ್ಮಿ ದೇವಳ, ಬೆಣ್ಣೆಕುದ್ರು ದೇವಳ, ಶ್ರೀ ಮಹಾಲಕ್ಷ್ಮಿ ದೇವಿ, ಮೊಗವೀರ ಸಮಾಜದ ಕುಲಗುರು ಮಾಧವ ಮಂಗಳ ಪೂಜಾರ್ಯ ಹಾಗೂ ಸದಿಯ ಸಾಹುಕಾರರನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.

ತುಳುನಾಡಿನ ಸಾಂಪ್ರದಾಯಿಕ ಬದುಕು, ಮೀನುಗಾರಿಕಾ ಸಂಸ್ಕೃತಿ ಹಾಗೂ ಕರಾವಳಿಯ ಧಾರ್ಮಿಕ ವೈಭವವನ್ನು ಪರಿಚಯಿಸುವ ಹಲವು ಸ್ತಬ್ಧಚಿತ್ರಗಳೊಂದಿಗೆ ವಿವಿಧ ಜಾನಪದ ಕಲಾತಂಡಗಳು, ಭಜನಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಚೆಂಡೆ, ಕೊಂಬು, ಕಹಳೆ ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳ ನಿನಾದ ಹಾಗೂ ಡಿಜೆ ಸಂಗೀತ ಮೆರವಣಿಗೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಉಡುಪಿ ಜಿಲ್ಲೆಯ ಉಚ್ಚಿಲ ದಸರಾ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಗಂಗಾರತಿ ಮತ್ತು ಸಮುದ್ರಾರತಿ ಕಾಪು ದ್ವೀಪಸ್ತಂಭದ ಸಮೀಪದ ಕಡಲ ತೀರದಲ್ಲಿ ಭಕ್ತಿಭಾವದ ವಾತಾವರಣದಲ್ಲಿ ನೆರವೇರಿತು. ಕಾಶಿಯಿಂದ ಆಗಮಿಸಿದ್ದ ಪಂಡಿತರು ವಿಧಿವಿಧಾನಗಳೊಂದಿಗೆ ಗಂಗಾರತಿ ಹಾಗೂ ಸಮುದ್ರಾರತಿಯನ್ನು ನೆರವೇರಿಸಿದರು. ಈ ಅಪರೂಪದ ಧಾರ್ಮಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಕಡಲ ತೀರದಲ್ಲಿ ಜಮಾಯಿಸಿದ್ದರು.
ಗಂಗಾರತಿ ಮತ್ತು ಸಮುದ್ರಾರತಿ ಬಳಿಕ ಸುಮಂಗಲೆಯರಿಂದ ಸಾಮೂಹಿಕ ಮಹಾಮಂಗಳಾರತಿ ನೆರವೇರಿತು. ಸಮುದ್ರ ತೀರದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳು ಉತ್ಸವದ ಆಧ್ಯಾತ್ಮಿಕ ಮಹತ್ವವನ್ನು ಹೆಚ್ಚಿಸಿದವು.

ಉಚ್ಚಿಲ ದಸರಾ ಸಮಾರೋಪದ ಅಂಗವಾಗಿ ಆಯೋಜಿಸಿದ್ದ ಸುಡುಮದ್ದು ಪ್ರದರ್ಶನವು ಉತ್ಸವದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂತು. ಸಮುದ್ರದ ಮಧ್ಯೆ 50ಕ್ಕೂ ಹೆಚ್ಚು ವಿದ್ಯುದ್ದೀಪಗಳಿಂದ ಅಲಂಕರಿಸಲಾದ ಬೋಟ್‌ಗಳಿಂದ ನಡೆದ ಸುಡುಮದ್ದು ಪ್ರದರ್ಶನ ಕಡಲ ತೀರದಲ್ಲಿ ನೆರೆದಿದ್ದ ಜನರನ್ನು ಆಕರ್ಷಿಸಿತು. ಆಕಾಶದಲ್ಲಿ ಬಣ್ಣಬಣ್ಣದ ಬೆಳಕುಗಳ ಚಿತ್ತಾರ ಮೂಡಿಸಿದ ಸುಡುಮದ್ದು ಪ್ರದರ್ಶನದೊಂದಿಗೆ ಲೇಸರ್ ಲೈಟ್ ಶೋ ಹಾಗೂ ಸಂಗೀತ ರಸಮಂಜರಿ ಉತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.

ಉತ್ಸವದ ಅಂತಿಮ ಘಟ್ಟವಾಗಿ ಕಾಪು ಬೀಚ್‌ನಲ್ಲಿ ಮಧ್ಯರಾತ್ರಿ ಶಾರದೆಯೊಂದಿಗೆ ನವದುರ್ಗೆಯರ ವಿಗ್ರಹಗಳನ್ನು ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಜಲಸ್ತಂಭನಗೊಳಿಸಲಾಯಿತು. ಇದರೊಂದಿಗೆ ಹಲವು ದಿನಗಳಿಂದ ಧಾರ್ಮಿಕ ಶ್ರದ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜನಸಾಗರದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ಉಡುಪಿ–ಉಚ್ಚಿಲ ದಸರಾ-2026ಕ್ಕೆ ವೈಭವದ ತೆರೆ ಬಿದ್ದಿತು.

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.