Advertisement

ಉಡುಪಿಯಲ್ಲಿ ಪ್ರಿಯದರ್ಶಿನಿ ಸೊಸೈಟಿ ಶಾಖೆ ಆರಂಭ

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕು ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಐದನೇ ಶಾಖೆಯು ಉಡುಪಿಯ ತಾಲೂಕು ಕಚೇರಿ, ಬಳಿಯ ಸನಿಲ್ ಪ್ಲಾಜಾ ಕಟ್ಟಡ ದಲ್ಲಿ ಅಕ್ಟೋಬರ್ 25ನೇ ತಾರೀಖಿನಂದು ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷರಾದ ಎಚ್ ವಸಂತ್ ಬೆರ್ನಾರ್ಡ್ ತಿಳಿಸಿರುತ್ತಾರೆ.
ಸಹಕಾರಿ ರಂಗದ ದಿಗ್ಗಜರಾದ ದಿವಂಗತ ಎಚ್ ನಾರಾಯಣ ಸನಿಲ್ ಮತ್ತು ದಿವಂಗತ ಪಂಜದ ಗುತ್ತು ಶಾಂತರಾಮ ಶೆಟ್ಟಿ ರವರ ಪ್ರೇರಣೆಯಂತೆ ಕಳೆದ ಐದು ವರ್ಷದ ಹಿಂದೆ ಪ್ರಾರಂಭಗೊAಡ ಪ್ರಿಯದರ್ಶಿನಿ ಕೋ ಆಪರೇಟಿವ್ ಪ್ರಸ್ತುತ 45 ಕೋಟಿ ಠೇವಣಿ ಹೊಂದಿದ್ದು, 484.78 ಕೋಟಿ ವಹಿವಾಟು ಮಾಡಿ 3843 ಸದಸ್ಯರನ್ನು ಹೊಂದಿ 54 ಲಕ್ಷ ವಾರ್ಷಿಕ ಲಾಭವನ್ನು ಪಡೆದು, ನಾಲ್ಕು ಶಾಖೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು ಇದೀಗ 5ನೇ ಶಾಖೆಯು ಉಡುಪಿಯಲ್ಲಿ ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ರವರು ಉದ್ಘಾಟನೆ ಮಾಡುವುದರೊಂದಿಗೆ ಪ್ರಾರಂಭಗೊಳ್ಳಲಿದೆ. ಅಧ್ಯಕ್ಷತೆಯನ್ನು ಮುಲ್ಕಿ ಸೀಮೆಯ ಅರಸರಾದ ಶ್ರೀ ಎಂ. ದುಗ್ಗಣ್ಣ ಸಾವಂತರು, ದೀಪ ಪ್ರಜ್ವಲನೆಯನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಕೆ. ಅಭಯಚಂದ್ರ ರವರು, ಭದ್ರತಾ ಕೊಠಡಿ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜ ರವರು, ಕಂಪ್ಯೂಟರ್ ವ್ಯವಸ್ಥೆ ಚಾಲನೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಮಿಥುನ್ ಎಮ್ ರೈ ರವರು, ಪ್ರಿಯದರ್ಶಿನಿ ಸ್ವ-ಸಹಾಯ ಗುಂಪಿಗೆ ಚಾಲನೆಯನ್ನು ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಒಕ್ಕೂಟ(KMF) ಮತ್ತು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮಂಗಳೂರು ಇದರ ನಿರ್ದೇಶಕರಾದ ಡಾ. ಐಕಳಬಾವ ದೇವಿ ಪ್ರಸಾದ್ ಶೆಟ್ಟಿಯವರು ಗೈಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಲಾವಣ್ಯ ಕೆ. ಆರ್ ರವರು, ಉಡುಪಿ ಜಿಲ್ಲಾ ಕೇಂದ್ರ ಸಹಕಾರಿ ಯೂನಿಯನ್ ಮತ್ತು ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಲಿ. ಇದರ ಅಧ್ಯಕ್ಷರಾದ ಶ್ರೀ ಇಂದ್ರಾಳಿ ಜಯಕರ ಶೆಟ್ಟಿ ರವರು, ಶ್ರೀ ಸರಸ್ವತಿ ಕೋ ಆಪರೇವಿಟ್ ಸೊಸೈಟಿ, ಪಡುಕುತ್ಯಾರ್ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಬಿ. ಸರ‍್ಯಕುಮಾರ್ ರವರು, ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ ಉಡುಪಿ ಇದರ ನಿರ್ದೇಶಕರಾದ ಡಾ| ಸುಶೀಲ್ ಜತ್ತನ್ನ ರವರು, ಹೈಟೆಕ್ ಮೆಡಿಕೆರ್ ಹಾಸ್ಪಿಟಲ್ ಉಡುಪಿ ಇದರ ಎಂ.ಡಿ. ಡಾ| ಟಿ. ಎಸ್. ರಾವ್,ಒS ರವರು, ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಶ್ರೀಧರ್ ದೇವಾಡಿಗ ರವರು, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಇದರ ಅಧ್ಯಕ್ಷರಾದ ಶ್ರೀ ರಮೇಶ್ ಕಾಂಚನ್ ರವರು, ಉಡುಪಿ ಹೋಮಿಯೋಪಥಿಕ್ ಫಿಶಿಷಿಯನ್ ಡಾ| ಬೆರಿಲ್ ಎ. ಬೆರ್ನಾರ್ಡ್ ರವರು, ಕಟ್ಟಡ ಮಾಲೀಕರಾದ ಶ್ರೀ ಶಂಭು ಎ. ಸನಿಲ್ ರವರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ.
ಸೊಸೈಟಿಯು 2021 ರಲ್ಲಿ ಪ್ರಾರಂಭಗೊAಡು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ., ಮಂಗಳೂರು ಇದರ ಅಧ್ಯಕ್ಷರಾದ ಡಾ|| ಎಂ. ಎನ್ ರಾಜೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 2025-26ನೇ ಸಾಲಿನಲ್ಲಿ 97% ಸಾಲ ವಸೂಲಾತಿ ನಡೆಸಿ ಲೆಕ್ಕಪರಿಶೋಧನಾ ವರದಿ (ಆಡಿಟ್ ವರದಿ) ಕೂಡಾ “ಎ” ಶ್ರೇಣಿಯಲ್ಲಿದ್ದು, ಹೆಮ್ಮೆ ಪಡುವಂತಾಗಿದೆ. ಸೊಸೈಟಿಯಲ್ಲಿ ಅಡಮಾನಕ್ಕೆ ಬರುವ ಚಿನ್ನಾಭರಣಗಳ ನೈಜತೆ ಮತ್ತು ಪರಿಶುದ್ಧತೆಯ ನಿಖರತೆಗಾಗಿ ಪ್ರಧಾನ ಕಚೇರಿಯಲ್ಲಿ ಗೋಲ್ಡ್ ಪ್ಯೂರಿಟಿ ಟೆಸ್ಟಿಂಗ್ ಮೆಷಿನ್‌ನ್ನು, ಸೊಸೈಟಿಯ 4 ಶಾಖೆಗಳಲ್ಲೂ ಇ-ಮುದ್ರಾಂಕ ವ್ಯವಸ್ಥೆ, ಡಿಜಿಟಲ್ ಬ್ಯಾಂಕಿAಗ್ ವ್ಯವಸ್ಥೆ, ಹವಾನಿಯಂತ್ರಿತ ಬ್ಯಾಂಕಿAಗ್ ವಿಭಾಗವನ್ನು ಹೊಂದಿರುತ್ತದೆ. ಸಂಘದಲ್ಲಿ 27 ಸಿಬ್ಬಂದಿಗಳು ಕಾರ್ಯನಿರ್ವಹಿಸುತಿದ್ದಾರೆ ಹಾಗೂ ಒಟ್ಟು 15 ನಿರ್ದೇಶಕರ ತಂಡ ಇದೆ. ಇವರೆಲ್ಲರ ಶ್ರಮದಿಂದಲೇ 2023-24ನೇ, 2024-25ನೇ ಮತ್ತು 2025-26ನೇ ಸಾಲಿನಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿAದ “ವಿಶಿಷ್ಟ ಸಾಧನ ಪ್ರಶಸ್ತಿ ದೊರಕಿರುತ್ತದೆ. ಹಾಗೂ 72ನೇ ಅಖಿಲ ಭಾರತ ಸಹಕಾರ ಸಪ್ತಾಹ 2025 ರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಬೆಂಗಳೂರು ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರು “ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ” ನೀಡಿ ಗೌರವಿಸಿರುತ್ತಾರೆ.
ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ವಿಜಯ ಕುಮಾರ್ ಸನಿಲ್, ನಿರ್ದೇಶಕರಾದ ಉಮಾನಾಥ್ ಜೆ ಶೆಟ್ಟಿಗಾರ್, ಧನಂಜಯ ಮಟ್ಟು, ಗಣೇಶ್ ಪ್ರಸಾದ್ ದೇವಾಡಿಗ, ಅನಿಲ್ ಪೂಜಾರಿ ಸಸಿಹಿತ್ಲು, ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಸುದರ್ಶನ್ ಪೂಜಾರಿ, ಉಡುಪಿ ಶಾಖಾ ಪ್ರಬಂಧಕರಾದ ಶ್ರೀಮತಿ ನಿಶಾ ಸುಹೈಲ್ ಡೇನಿಯಲ್ ಉಪಸ್ಥಿತರಿದ್ದರು.

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.