Advertisement

ಪ್ರೇಕ್ಷಕರನ್ನು ಸೆಳೆಯುತ್ತಿದೆ ಟೈಮ್ ಪಾಸ್ ಟೀಸರ್!

Editorialಸಿನಿಮಾ1 year ago56 Views

ಚೇತನ್ ಜೋಡಿದಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಟೈಮ್ ಪಾಸ್’ ಫಸ್ಟ್ ಲುಕ್ ಪೋಸ್ಟರ್ ಮೂಲಕ ಒಂದಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಬಿಡುಗಡೆಗೊಂಡಿದೆ. ಅದರ ಬಗ್ಗೆಯೂ ಇದೀಗ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಮೂಡಿಕೊಂಡಿದೆ. ಹೀಗೆ ಟೀಸರ್ ಸುತ್ತಾ ಪ್ರೇಕ್ಷಕರ ಗಮನ ನೆಟ್ಟಿರುವಾಗಲೇ ಟೈಮ್ ಪಾಸ್ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಇದೇ ಅಕ್ಟೋಬರ್ ೧೭ರಂದು ಟೈಮ್ ಪಾಸ್ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.
ಈ ಟೀಸರ್‌ನಲ್ಲಿ ಈವತ್ತಿನ ಸಮಾಜಕ್ಕೆ ಕನ್ನಡಿ ಹಿಡಿದಂತಿರುವ ಕಥೆಯೊಂದರ ಸುಳಿವುಗಳು ಗೋಚರವಾಗುತ್ತವೆ. ಮನೋರಂಜನೆಯನ್ನೇ ಮುಖ್ಯ ಬಿಂದುವಾಗಿಸಿಕೊಂಡು ಈ ಸಿನಿಮಾವನ್ನು ರೂಪಿಸಿರೋದಾಗಿ ನಿರ್ದೇಶಕರು ಈ ಹಿಂದೆ ಹೇಳಿಕೊಂಡಿದ್ದರು. ಅಂಥಾ ಒಂದಷ್ಟು ಸುಳಿವುಗಳು ಈ ಟೀಸರ್‌ನಲ್ಲಿ ಕಾಣಿಸಿವೆ. ಇದು ಚೇತನ್ ಜೋಡಿದಾರ್ ನಿರ್ದೇಶನದ ಚೊಚ್ಚಲ ಸಿನಿಮಾ. ಈವರೆಗೂ ಯಾವ ನಿರ್ದೇಶಕರ ಬಳಿಯೂ ಕೆಲಸ ಮಾಡಿದ ಅನುಭವ ಇಲ್ಲದಿದ್ದರೂ ಕೂಡಾ, ಸಿನಿಮಾ ಪ್ರೇಮದಿಂದ ಎಲ್ಲವನ್ನೂ ಸ್ವತಃ ಕಲಿತುಕೊಂಡು ಚೇತನ್ ಜೋಡಿದಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರಂತೆ.


ಸಿನಿಮಾ ಕ್ಷೇತ್ರದೊಳಗಿನ ವಿಚಾರಗಳನ್ನೇ ಇಟ್ಟುಕೊಂಡು ಇದುವರೆಗೂ ಒಂದಷ್ಟು ಸಿನಿಮಾಗಳು ರೂಪುಗೊಂಡಿವೆ. ಇಲ್ಲಿಯೂ ಕೂಡಾ ಸಿನಿಮಾ ರಂಗದ ವಾಸ್ತವ ಕಥನ ಇದೆಯಂತೆ. ಅದರ ಒಂದಷ್ಟು ಝಲಕ್ಕುಗಳು ಈ ಟೀಸರ್‌ನಲ್ಲಿ ಕಾಣಿಸಿವೆ. ಟೀಸರ್ ಬಗೆಗಿನ ಚರ್ಚೆ ಚಾಲ್ತಿಯಲ್ಲಿರುವಾಗಲೇ ಮತ್ತೊಂದು ಖುಷಿಯ ಸಂಗತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಅದು ಆಡಿಯೋ ಹಕ್ಕುಗಳ ಕುರಿತಾದದ್ದು. ಪ್ರತಿಷ್ಠಿತ ಆಶಡಿಯೋ ಸಂಸ್ಥೆಯಾದ ಸರೆಗಮ ಕನ್ನಡ ಸಂಸ್ಥೆ ಟೈಮ್ ಪಾಸ್ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಅದರ ಯೂ ಯೂಬ್ ಆನೆಲ್ಲಿನಲ್ಲಿ ಹಾಡುಗಳು ಬಿಡುಗಡೆಗೊಂಡಿವೆ. ಮ್ಯಾಕ್ಸ್, ಡೆವಿಲ್, ಮಾರ್ಕ್ ಚಿತ್ರಗಳ ಆಡಿಯೋ ಹಕ್ಕುಗಳನ್ನು ಇದೇ ಸಂಸ್ಥೆ ಪಡೆದುಕೊಂಡಿತ್ತು. ಪ್ಯಾನಿಂಡಿಯಾ ಮಟ್ಟದಲ್ಲಿ ಹೆಸರು ಮಾಡಿರುಯಯವ ಈ ಸಂಸ್ಥೆ ಟೈಮ್ ಪಾಸ್ ಹಾಡುಗಳ ಹಕ್ಕು ಪಡೆದಿರೋದರಿಂದ ಚಿತ್ರತಂಡ ಖುಷಿಗೊಂಡಿದೆ.
ಡಾರ್ಕ್ ಹ್ಯೂಮರ್ ಜಾನರಿಗೆ ಸೇರಿಕೊಳ್ಳುವ ಈ ಚಿತ್ರವನ್ನು ಶ್ರೀ ಚೇತನ ಸರ್ವಿಸಸ್ ಬ್ಯಾನರ್ ಮೂಲಕ ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ ಎಂ.ಹೆಚ್ ಕೃಷ್ಣಮೂರ್ತಿ ನಿರ್ಮಾಣ ಮಾಡಿದ್ದಾರೆ. ಇಮ್ರಾನ್ ಪಾಷಾ, ವೈಸಿರಿ ಕೆ ಗೌಡ, ರತ್ಷಾರಾಮ್, ಕೆ. ಚೇತನ್ ಜೋಡಿದಾರ್, ಓಂ ಶ್ರೀ ಯಕ್ಷಶಿಫ್, ಪ್ರಭಾಕರ್ ರಾವ್, ನವೀನ್ ಕುಮಾರ್, ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಗಿರೀಶ್ ಗೌಡ ಸಾಹಸ ನಿರ್ದೇಶನ, ವೈಷ್ಣವಿ ಸತ್ಯನಾರಾಯಣ್ ನೃತ್ಯ ನಿರ್ದೇಶನ, ರಾಜೀವ್ ಗಣೇಶ್ ಛಾಯಾಗ್ರಹಣ, ಮಣಿ ಪ್ರಚಾರ ಕಲೆ, ಡಿ. ಶಾಮಸುಂದರ್, ಬಿ.ಕೆ ದಯಾನಂದ ನಿರ್ಮಾಣ ನಿರ್ವಹಣೆ, ಹರಿ ಪರಮ್ ಸಂಕಲನ, ಡಿ.ಎಂ ಉದಯ ಕುಮಾರ್ (ಡಿಕೆ) ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಈ ಚಿತ್ರದ ಟ್ರೈಲರ್ ಅಕ್ಟೋಬರ್ 7 ನೇ ತಾರೀಕು ಬಿಡುಗಡೆಯಾಗಲಿದೆ.

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.