

ರುಡ್ ಸೆಟ್ ಸಂಸ್ಥೆ ಬ್ರಹ್ಮಾವರ ಕೆನರಾ ಬ್ಯಾಂಕ್ ರೋಟರಿ ಕ್ಲೆಬ್ ಜಿಲ್ಲಾ ಸಣ್ಣ ಕೈಗಾರಿಕೆ ಸಂಘ ಉಡುಪಿ ಆಸರೆ ಸಂಘಟನೆ ಹಾಗು ಇತರ ಸಂಘಟನೆ ಸಹಭಾಗಿತ್ವದಲ್ಲಿ ಉದ್ಯಮಿಗಳ ಸಬಲೀಕರಣದ ನಿಟ್ಟಿನಲ್ಲಿ ಕಿರು ಉದ್ಯಮ ಮಾಡುವ ಉದ್ಯಮಿಗಳಿಗೆ ಉದ್ಯಮದ ಸ್ಥಳ ಖರೀದಿ ನಿರ್ಮಾಣ ಬಂಡವಾಳ ಹೂಡಿಕೆ ಯಂತ್ರೋಪಕರಣಗಳು ಮತ್ತು ವಾಹನ ಸೇರಿದ್ದಂತೆ ಇನ್ನು ಅನೇಕ ವ್ಯಾಪಾರದ ಅವಶ್ಯಕತೆಗಳಿಗಾಗಿ ಕಿರು ಉದ್ಯಮಗಾರರಿಗೆ ಸಾಲ ಸೌಲಭ್ಯಗಳನ್ನು ಒದಗಿಸಿ ಕೊಡುವ ಉದ್ದೇಶದಿಂದ ಬ್ರಹ್ಮಾವರದಲ್ಲಿ ಸಾಲ ಮೇಳ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ದ್ವೀಪ ಬೆಳಗಿಸಿ ಮಾತನಾಡಿದ ಗಂಗಾಧರ್ ಎಚ್ .ಕೆ ( ಮಹಾ ಪ್ರಬಂಧಕರು ವೃತ್ತ ಕಚೇರಿ ಕೆನರಾ ಬ್ಯಾಂಕ್ ) ಸಾಲ ಮೇಳವನ್ನು ನಮ್ಮ ದೇಶದಲ್ಲಿ ಪ್ರಥಮ ಬಾರಿಗೆ ಪರಿಕಲ್ಪನೆಗೆ ತಂದದ್ದು ದಕ್ಷಿಣ ಕನ್ನಡ ದವರಾದ ಜನಾರ್ದನ ಪೂಜಾರಿಯವರು ಎಂದು ತಿಳಿಸಿದರು ರುಡ್ ಸೆಟ್ ಸಂಸ್ಥೆ ದೇಶಾದ್ಯಂತ ಚಳವಳಿಯಾಗಿದೆ ರುಡ್ ಸೆಟ್ ಸಂಸ್ಥೆ ಕೆನರಾ ಬ್ಯಾಂಕ್ ಮತ್ತು ಧರ್ಮಸ್ಥಳ ಟ್ರಸ್ಟ್ ಈ ಸಂಸ್ಥೆ ಗಳಿಂದ ನಿರುದ್ಯೋಗಿ ಗಳಿಗೆ ಉದ್ಯೋಗ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿದೆ ರುಡ್ ಸೆಟ್ ಸಂಸ್ಥೆಯ ಯಶಸ್ಸನ್ನು ಕಂಡು ಭಾರತ ಸರಕಾರ ರುಡ್ ಸೆಟ್ಟಿಯನ್ನು ದೇಶಾದ್ಯಂತ ೨೭ ಸ್ಥಳಗಳಲ್ಲಿ ಇದೇ ಮಾದರಿಯ ಸಂಸ್ಥೆ ಪ್ರಾರಂಭಿಸಿದೆ ಸ್ವ ಉದ್ಯೋಗಿಗಳಿಗೆ ಸುವರ್ಣಾವಕಾಶ ಇದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಬೊಮ್ಮಯ್ಯ ಎಮ್., ನಿರ್ದೇಶಕರು, ರುಡ್ಸೆಟ್ ಸಂಸ್ಥೆ, ಬ್ರಹ್ಮಾವರ ಮಹಾಮಯೆ ಪ್ರಸಾದ್ ರಾಯ್ ಉಪ-ಮಹಾಪ್ರಭಂದಕರು, ಪ್ರಾದೇಶಿಕ ಕಛೇರಿ-1 ಕೆನರಾ ಬ್ಯಾಂಕ್, ಉಡುಪಿ ವಿಜಯಕುಮಾರ ಬಿ. ಪಿ. ಕಾರ್ಯನಿರ್ವಾಹಕ ನಿರ್ದೇಶಕರು, ರುಡ್ ಸೆಟಿ ಪ್ರಧಾನ ಕಛೇರಿ, ಉಜಿರೆ ಶ್ರೀ ಹರೀಶ್ ಜಿ. ಬ್ಯಾಂಕ್ಗಳ ಜಿಲ್ಲಾ ಮಾರ್ಗದರ್ಶಿ ಅಧಿಕಾರಿಗಳು ಉಡುಪಿ ಹರೀಶ್ ಕುಂದರ್, ಅಧ್ಯಕ್ಷರು, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ, ಉಡುಪಿ ಹರೀಣಿ ಅಜಯ್ ರಾವ್. ಅಧ್ಯಕ್ಷರು, ಆಸರೆ ರುಡ್ಸೆಟ್ ಸಂಘಟನೆ, ಬ್ರಹ್ಮಾವರ ಸಂಜಯ್ ಕತ್ರಿಸಹಾಯಕ ಮಹಾ ಪ್ರಬಂಧಕರು ವೃತ್ತ ಕಚೇರಿ ಮಣಿಪಾಲ . ಸೀತಾರಾಮ ಶೆಟ್ಟಿ ಡೆಪ್ಯೂಟಿ ಡೈರೆಕ್ಟರ್ ಡಿ . ಐ . ಸಿ . ಉಡುಪಿ ಅಜಯ್ ರುಡ್ ಸೆಟ್ಟಿ ಸಂಸ್ಥೆ ನಿರ್ದೇಶಕರು ಉಡುಪಿ ಎಂ ಎಂ. ಹುಸೈನ್ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ, ರುಡ್ಸೆಟ್ ಸಂಸ್ಥೆ, ಬ್ರಹ್ಮಾವರ, ಉಡುಪಿ ಜಿಲ್ಲಾ ಇತರ ಸಂಘ- ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸರ್ವ ಸದಸ್ಯರು ರುಡ್ಸೆಟ್ ಆಸರೆ ಸಂಘಟನೆ ಸದಸ್ಯರು ಮತ್ತು ಸಂಸ್ಥೆಯ ಶಿಬಿರಾರ್ಥಿಗಳು ಉಪಸ್ಥಿತರಿದ್ದರು ನಿರೂಪಣೆ ಚೈತ್ರ ಕೆ . ಸ್ವಾಗತ ಬೊಮ್ಮಯ್ಯ ಎಮ್ ಧನ್ಯವಾದ ಸಂತೋಷ್ ಶೆಟ್ಟಿ ಮಾಡಿದರು







