Advertisement

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ “ವರ್ಣೋತ್ಸವ-2026 ಕಾರ್ಯಕ್ರಮ ಉದ್ಘಾಟಿಸಿದ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಪಿ ಶ್ರೀನಿವಾಸ ತಂತ್ರಿ

Editorialಶಿಕ್ಷಣ2 months ago14 Views

ಬಂಟಕಲ್, ಫೆ.11: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರದ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ, ಮ್ಯಾನೇಜೆಂಟ್ ಸ್ಪರ್ಧೆಗಳ ಕಾರ್ಯಕ್ರಮ ವರ್ಣೋತ್ಸವ 2026ನ್ನು ಬುಧವಾರ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಟಾನದ ಉಪಾಧ್ಯಕ್ಷರಾದ & ಶ್ರೀನಿವಾಸ ತಂತ್ರಿಗಳು ದೀಪ ಬೆಳಗಿಸುವ ಮೂಲಕ ಮತ್ತು ಕೋನಾರ್ಕ್ ಚಕ್ರ ಅನಾವರಣ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿ ಮತ್ತು ಕ್ಲೀಯರ್ ಫೀಡ್, ಬೆಂಗಳೂರು ఇల్లి లిడో ఇంజినియరా, ఆగి ಕಾರ್ಯನಿರ್ವಹಿಸುತ್ತಿರುವ ದೀಪಕ್ ನಾಯಕ್ ಇವರು ಮುಖ್ಯ ಅತಿಥಿಗಳಾಗಿ ಮತ್ತು ಶ್ರೀಮತಿ ಸ್ನೇಹಲ್ ವಿ ರಾವ್, ಕ್ವಾಂಟಿಟಿ ಸರ್ವೇಯರ್ ಸೈಮನ್ಸ್ ಆ್ಯಂಡ್ ಅಸೋಸಿಯೆಟ್ಸ್, ಉಡುಪಿ ಇವರು ಅತಿಥಿಗಳಾಗಿ ಭಾಗವಹಿಸಿದ್ದರು. ಗೌರವ

ಸಾಧಿಸುವಾಗ ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನವೀನತೆ ಸಂಸ್ಕೃತಿಯ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು. ತಾಂತ್ರಿಕ ಪ್ರಗತಿ ಹಾಗೂ ಸೃಜನಶೀಲತೆಯ

ಸಮತೋಲನ ಸಾಧಿಸುವುದು ಅಗತ್ಯ ಎಂದ ಅವರು, ವರ್ಣೋತ್ಸವದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪ್ರತಿಭೆ ಪ್ರದರ್ಶಿಸಲು, ಪರಸ್ಪರ ಸಹಕಾರ ಬೆಳೆಸಲು ಸ್ಪರ್ಧಾತ್ಮಕ ಮತ್ತು ಆರೋಗ್ಯಕರ ಮನೋಭಾವವನ್ನು ಉತ್ತಮ ಅವಕಾಶ ಬೆಳೆಸಲು ಒದಗಿಸುತ್ತದೆ ಎಂದು ಹೇಳಿದರು.

ಶ್ರೀಮತಿ ಸ್ನೇಹಲ್ ವಿ ರಾವ್ ಮಾತನಾಡಿ, ವಿದ್ಯಾರ್ಥಿಗಳು ತಾಂತ್ರಿಕ ಬೆಳವಣಿಗೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಕಾಲೇಜಿನಲ್ಲಿ ಕಲಿಯುವುದು ಚಾಲನಾ ಪರವಾನಿಗೆಯಂತೆ ಅದು ನಮಗೆ ಜ್ಞಾನ ನೀಡುತ್ತದೆ ಮತ್ತು ನಿಜವಾದ ಅನುಭವ ಸಿಗುತ್ತದೆ ಎಂದರು.

ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಟಾನದ ಉಪಾಧ್ಯಕ್ಷರಾದ ಶ್ರೀ 2 ಶ್ರೀನಿವಾಸ ತಂತ್ರಿಗಳು, ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್, ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿಗಳಾದ ಪ್ರೊ. ಡಾ. ರಾಧಾಕೃಷ್ಣ ಎಸ್ ಐತಾಳ್, ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಹಾಗೂ ಕಾಲೇಜಿನ ಸಾಂಸ್ಕೃತಿಕ ಸಂಯೋಜಕಿ ಶ್ರೀಮತಿ ಸವಿತ

ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಪ್ರೊ. ಡಾ. ರಾಧಾಕೃಷ್ಣ ಎಸ್ ಐತಾಳ್ ಅವರು ಮಾತನಾಡಿ, ಸಂಸ್ಥೆಯ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಗೆ ನೀಡುವ ಆದ್ಯತೆಯನ್ನು ವಿವರಿಸಿದರು. ಸಂದರ್ಭದಲ್ಲಿ ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಮೆಕ್ಯಾನಿಕಲ್ ವಿಭಾಗದ ಲ್ಯಾಬ್ ಸಿಬ್ಬಂದಿ ವಿಶ್ಲೇಶ್ ಕಳತ್ತೂರು ಅವರು ರೂಪಿಸಿದ ಕೋನಾರ್ಕ್ ಚಕ್ರದ ಸೃಜನಾತ್ಮಕತೆಯನ್ನು ಪ್ರಶಂಶಿಸಿದರು.

ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾ‌ರ್ ಮಾತನಾಡಿ, ವರ್ಣೋತ್ಸವವು ತಾಂತ್ರಿಕ, ಸಾಂಸ್ಕೃತಿಕ ಮತ್ತು ವ್ಯವಹಾರಿಕ ಚಟುವಟಿಕೆಗಳನ್ನು ಒಗ್ಗೂಡಿಸುವ ಕಾರ್ಯಕ್ರಮವಾಗಿದೆ. ಅಲ್ಲದೆ ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನ ದೊರೆತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಸ್ವಾಗತಿಸಿದರು. ಭೌತಶಾರ್ಸ್ತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಧ್ಯಾ ಇವರು ಮಂಥನ ಇನ್ ಹೌಸ್ ತಾಂತ್ರಿಕ ಸ್ಪರ್ಧೆಯ ವಿಜೇತರ ಪಟ್ಟಿ ವಾಚಿಸಿದರು. ಸಾಂಸ್ಕೃತಿಕ ಘಟಕದ ಸಂಯೋಜಕರಾದ ಸವಿತಾ ಎ ಶೆಣೈ ವಂದನಾರ್ಪಣೆ ಸಲ್ಲಿಸಿದರು.

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.